ಬಳ್ಳಿಗೇರಿ-ಸಿಂಧೂರದಲ್ಲಿ ದೈವೀ ಸಂಭ್ರಮದ ಜ್ವಾಲೆ – 10ನೇ ವರ್ಷದ ಶ್ರೀ ಸೀಮಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವಕ್ಕೆ ಭವ್ಯ ಚಾಲನೆ ಬಳ್ಳಿಗೇರಿ-ಸಿಂಧೂರ:
ಕರ್ನಾಟಕ - ಮಹಾರಾಷ್ಟ್ರ ಬಳ್ಳಿಗೇರಿ - ಸಿಂಧೂರ: ಶೇರಿ ತೋಟದಲ್ಲಿ ನೆಲಸಿರುವ ಶ್ರೀ ಸೀಮಿ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರದಿಂದ ಧೂಮಧಾಮದಿಂದ ಆರಂಭಗೊಳ್ಳಲಿದೆ. ಈ ಜಾತ್ರೆಯು ಭಕ್ತಿಭಾವ, ಆಧ್ಯಾತ್ಮಿಕತೆ ಹಾಗೂ ಗ್ರಾಮೀಣ ಸಾಂಸ್ಕೃತಿಕ ವೈಭವದ ಸಂಗಮವಾಗಿ ನಡೆಯಲಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ ಮೂಡಿಸಿದೆ.
ಜಾತ್ರೆಗೆ ದಿವ್ಯ ಸಾನಿಧ್ಯವಾಗಿ ಶ್ರೀ 108 ಷ್ರೀ ಬ್ರಹ್ಮ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು (ಸಂಸ್ಥಾನ ಮಠ, ಜವಳಿ ಕಲ್ಲಹಿಪ್ಪರಗಿ) ಆಗಮಿಸಲಿದ್ದಾರೆ. ಪ್ರವಚನಕಾರರಾಗಿ ವೇದಮೂರ್ತಿ ಬಸಯ್ಯಸ್ವಾಮಿಗಳು (ಬಸರಗಿ), ಶ್ರೀ ಅಶೋಕ ಮಹಾರಾಜರು (ಏಕುಂಡಿ) ಹಾಗೂ ಶ್ರೀ ಮಹಾದೇವ ಸುತಾರ (ಸಿಂದೂರ) ಉಪಸ್ಥಿತರಿದ್ದು, ಎರಡು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಲಿದ್ದಾರೆ.
ಗುರುವಾರ (30-05-2026):
ಜಾತ್ರೆಯ ಮೊದಲ ದಿನ ಮಧ್ಯಾಹ್ನ 1 ಗಂಟೆಗೆ ಟ್ರ್ಯಾಕ್ಟರ್-ಟ್ರೈಲರ್ ಜಗ್ಗುವ ಸ್ಪರ್ಧೆ ನಡೆಯಲಿದೆ. ಇದು ಗ್ರಾಮೀಣ ಕ್ರೀಡೆಗಳ ರೋಚಕತೆಯನ್ನು ಹೆಚ್ಚಿಸುವ ಪ್ರಮುಖ ಆಕರ್ಷಣೆಯಾಗಿದೆ.
ಶುಕ್ರವಾರ (01-05-2026):
ಮುಂಜಾನೆ 8 ಗಂಟೆಗೆ ಶ್ರೀ ಸೀಮಿ ಲಕ್ಷ್ಮಿ ದೇವಿಯ ಮೂರ್ತಿಗೆ ಅಭಿಷೇಕ ನೆರವೇರಿಸಲಿದ್ದು, 9 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ನಂತರ 10 ಗಂಟೆಗೆ ಪೂಜ್ಯರಿಂದ ಪ್ರವಚನ ಜರುಗಲಿದೆ.
ಮಧ್ಯಾಹ್ನ 1 ಗಂಟೆಗೆ ಕುಂಟಿ ಸ್ಪರ್ಧೆ, 2 ಗಂಟೆಗೆ ಸ್ಲೋ ಮೋಟಾರ್ ಸೈಕಲ್ ಸ್ಪರ್ಧೆ ಹಾಗೂ ಸಂಜೆ 4 ಗಂಟೆಗೆ ಜಿದ್ದಾ-ಜಿದ್ದಿ ಡೊಳ್ಳಿನ ಪದಗಳು ನಡೆಯಲಿದ್ದು, ಭಕ್ತರನ್ನು ಮನರಂಜಿಸಲಿವೆ.
ಜಾತ್ರೆಯ ಎರಡೂ ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಸಿಂದೂರ ಹಾಗೂ ಬಳ್ಳಿಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರೆಯು ಗ್ರಾಮದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸಲಿದೆ
ವರದಿ: ಲಕ್ಷ್ಮಣ ಮೂಕಿ,8618861316
UK FAST KANNADA NEWS
Comments
Post a Comment