ಅಥಣಿಯಲ್ಲಿ ಪತ್ರಕರ್ತರ ಏಕಮತ: ಅಲ್ಲಾವುದ್ದೀನ್ ಶೇಖ್ ಅಧ್ಯಕ್ಷ

ಅಥಣಿ, ಮಾ.28: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಥಣಿ ತಾಲೂಕು ಘಟಕದ ಅಧ್ಯಕ್ಷರಾಗಿ ಅಲ್ಲಾವುದ್ದೀನ್ ಶೇಖ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ಅವರ ಸಮ್ಮುಖದಲ್ಲಿ, ಅಲ್ಲಾವುದ್ದೀನ್ ಶೇಖ್ ಅವರನ್ನು ಅಧಿಕೃತವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ, “ನಾವು ಹುಟ್ಟುವಾಗ ಏನನ್ನೂ ತಂದುಕೊಂಡು ಬರುವುದಿಲ್ಲ; ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇರುವಷ್ಟು ದಿನ ಸಮಾಜಕ್ಕೆ ಒಳ್ಳೆಯದು ಮಾಡುವುದೇ ನಮ್ಮ ಕರ್ತವ್ಯ. ಯಾರಿಗೂ ಭಯಪಡದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ನಮ್ಮ ಕೆಲಸದಿಂದ ನಾಲ್ವರಿಗೆ ಉಪಯೋಗವಾಗುವಂತೆ ಪ್ರತಿದಿನ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಸಂಚಾಲಕರು ಚಂದ್ರು ಸರ್, ಉತ್ತರ ಕರ್ನಾಟಕದ ಯೂಟ್ಯೂಬ್ ಸ್ಟಾರ್ ಬಸವರಾಜ ಸನದಿ, ಹನುಮಂತ ಕುರಬರ, ಅಜಯ ಕಾಂಬಳೆ, ವಿಠ್ಠಲ ಖೋಕಾಟೆ, ರಶೀದ್ ಶೇಖ್, ಲಕ್ಷ್ಮಣ ಮೂಕಿ, ಶಿವು ಕರಕರಮೆಂಡೆ, ಕಿರಣ ಪಾಟೂಳೆ, ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಲಕ್ಷ್ಮಣ ಮೂಕಿ,8618861316
UK FAST KANNADA NEWS 

Comments