ವಿದ್ಯಾರ್ಥಿ ಪ್ರತಿಭೆ ಅನಾವರಣಗೊಳಿಸಿದ ಸಾಮಾನ್ಯ ಜ್ಞಾನ ಪರೀಕ್ಷೆ

ಅಥಣಿ: ಕೆಲವು ವಸ್ತುಗಳನ್ನು ಹಣದಿಂದ ಖರೀದಿಸಬಹುದು ಅಥವಾ ಸಾಲದಿಂದಾದರೂ ಪಡೆಯಬಹುದು ಆದರೆ ಸಮಯ ಅನ್ನುವುದನ್ನು ಹಣದಿಂದ ಮತ್ತು ಸಾಲದ ರೂಪದಲ್ಲಿ ಯಾವತ್ತು ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳಾದ ತಮ್ಮೆಲ್ಲರಿಗೂ ಒಂದು ಕಲಿಯುವ ಅವಕಾಶದ ಸಮಯ ಈಗಲೇ ಮಾತ್ರ ಇರುತ್ತದೆ. ಅದನ್ನು ಒಂದಿಷ್ಟು ವ್ಯರ್ಥ ಮಾಡದೇ ಸಮಯವನ್ನು ಸಂಪತ್ತು ಎಂದು ತಿಳಿದು ಸರಿಯಾಗಿ ಬಳಕೆ ಮಾಡಿಕೊಂಡು ದೇಶ ಕಟ್ಟುವಲ್ಲಿ ತಮ್ಮ ಪಾತ್ರ ಅಮೂಲ್ಯವಾಗಿರುತ್ತದೆ ಅದಕ್ಕಾಗಿ ದೇಶದ ಭವಿಷ್ಯ ಶಾಲೆಗಳಲ್ಲಿ ನಿರ್ಮಾಣವಾಗುತ್ತದೆ ಎಂದು ವಿದ್ವಾಂಸರು,ಸಾಹಿತಿಗಳು, ಹಿರಿಯ ಚಿಂತಕರಾದ ಡಾ ವ್ಹಿ ಎಸ್ ಮಾಳಿಯವರು ಹೇಳಿದರು.
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿಭಾಗದ ಬಳ್ಳಿಗೇರಿ ಗ್ರಾಮದಲ್ಲಿ ಶ್ರೀ ಬಸವ ಜ್ಯೋತಿ ಫೌಂಡೇಶನ್ ಬಳ್ಳಿಗೇರಿ ಹಾಗೂ ಬಿ ಬಿ ಇಮ್ಮಡಿ ಸರ್ಕಾರಿ ಪ್ರೌಢಶಾಲೆ ಇವರ ಸಂಯುಕ್ತಶ್ರಯದಲ್ಲಿ 2026ರ ಹೊಸ ವರ್ಷದ ನಿಮಿತ್ಯವಾಗಿ ಬಿ ಬಿ ಇಮ್ಮಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಯ ಬಹುಮಾನ ವಿತರಣಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಸಸಿಗೆ ನೀರೆರೆದು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
  ಈ ಜಗತ್ತಿನೊಳಗೆ ನಾವು ಕಣ್ಣು ತೆರೆದು ನೋಡಬೇಕು ಬಹಳಷ್ಟು ವಿದ್ಯಾರ್ಥಿಗಳು ಬಹಳಷ್ಟು ಬುದ್ಧಿವಂತರು ಇರುತ್ತಾರೆ ಆದರೆ ಪುಸ್ತಕದ ಓದಿಗೆ ಮಾತ್ರ ಸೀಮಿತರಾಗಿರುತ್ತಾರೆ ಅವರಿಗೆ ಜಗತ್ತಿನ ಜ್ಞಾನ ಗೊತ್ತಿರುವುದಿಲ್ಲ ನಮಗೆ ಪುಸ್ತಕದ ಜ್ಞಾನ ಎಷ್ಟು ಮುಖ್ಯವೋ ಜಗತ್ತಿನ ಜ್ಞಾನ ಅಷ್ಟೇ ಮುಖ್ಯವಾಗಿರುತ್ತದೆ ಜಗತ್ತಿನ ಜ್ಞಾನ ನಮಗೆ ಗೊತ್ತಿರಬೇಕಾದರೆ ಮುಖ್ಯವಾಗಿ ಸಾಮಾನ್ಯ ಜ್ಞಾನ ನಮಗೆ ಇರಬೇಕು. ಈ ಸಾಮಾನ್ಯ ಜ್ಞಾನದಿಂದಲೇ ತಾವು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆ ಸೇವೆ ಸಲ್ಲಿಸುವವರು ತಾವಾಗುತ್ತಿರಿ ಅವಾಗ ಮಾತ್ರ ತಮ್ಮ ತಮ್ಮ ತಂದೆ ತಾಯಿಗಳು ತಮಗೆ ಜನ್ಮ ನೀಡಿದ್ದಕ್ಕೆ, ಶಿಕ್ಷಕರು ಮಾಡಿದ ಬೋಧನೆ, ಶ್ರೀ ಬಸವ ಜ್ಯೋತಿ ಫೌಂಡೇಶನ್ ಆಯೋಜಿಸಿದ ಸಾಮಾನ್ಯ ಜ್ಞಾನ ಪರೀಕ್ಷೆ ಮತ್ತು ಬಹುಮಾನ ವಿತರಣೆ ಹಾಗೂ ಇಮ್ಮಡಿ ಕುಟುಂಬದವರು ಈ ಶಾಲೆಗೆ ಜಾಗ ನೀಡಿದ್ದು ಈ ಎಲ್ಲವೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
     ಅಥಣಿ ತಾಲೂಕಾ ದಂಡಾಧಿಕಾರಿಗಳಾದ ಸಿದರಾಯ ಭೋಸಗಿಯವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ತಮ್ಮನ್ನು ಪೋಷಿಸುವ ತಂದೆ–ತಾಯಿಗಳನ್ನು ಸದಾ ಗೌರವಿಸಬೇಕು. ಹಿರಿಯರು ಹೇಳುವ ಉತ್ತಮ ವಿಚಾರಗಳನ್ನು ಮನಸ್ಸಿನಲ್ಲಿ ಅಳವಡಿಸಿಕೊಂಡು, ಶಿಸ್ತು ಮತ್ತು ಮೌನದ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತುಗಳನ್ನು ಸ್ಮರಿಸಿ, ವಿದ್ಯಾರ್ಥಿ ಜೀವನವೇ ಭವಿಷ್ಯದ ಅಡಿಪಾಯ ಎಂದು ಹೇಳಿದರು. 
        ಮಾಜಿ ಜಿಪಂ ಸದಸ್ಯರಾದ ಚಂದ್ರಕಾಂತ ಇಮ್ಮಡಿ ಮಾತನಾಡಿ ಇವತ್ತು ಎಷ್ಟೋ ಕಡೆಗೆ ಸಮಾಜದ ದಿಕ್ಕು ತಪ್ಪಿಸುವ ಮನರಂಜನೆ ಕಾರ್ಯಕ್ರಮ ನಡೆಸಿ ಸಮಾಜದ ದಿಕ್ಕು ಮತ್ತು ಯುವಕರನ್ನು ದಾರಿ ಕೆಲಸ ನಡೆಯುತ್ತಿದೆ. ಅಂತಹದರಲ್ಲಿ ಶ್ರೀ ಬಸವಜ್ಯೋತಿ ಫೌಂಡೇಶನ್ ಮಾಡಿದ ಕಾರ್ಯವನ್ನು ಶ್ಲಾಘಿಸಿದರು.
            ಚಿಕ್ಕ ಮಕ್ಕಳ ವೈದ್ಯರಾದ ಡಾ. ಆನಂದ ಗುಂಜಿಗಾವಿ ಮಾತನಾಡಿ
ವಿದ್ಯಾರ್ಥಿ ಜೀವನದಲ್ಲೇ ನಾನು ಮುಂದೆ ಏನಾಗಬೇಕು ಎಂಬ ಸ್ಪಷ್ಟ ಹೊಂದಬೇಕು. “ಗುರಿ ಮುಂದೆ, ಗುರು ಹಿಂದೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು” ಎಂಬ ಗಾದೆ ಮಾತನ್ನು ಉಲ್ಲೇಖಿಸಿದ ಅವರು, ದೃಢ ನಿರ್ಧಾರ, ನಿರಂತರ ಪ್ರಯತ್ನ ಹಾಗೂ ಒಳ್ಳೆಯ ಗುರುಗಳ ಮಾರ್ಗದರ್ಶನ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ತಿಳಿಸಿದರು.ಮಾಜಿ ಜಿಪಂ ಸದಸ್ಯ ಹಾಗೂ ವಕೀಲರಾದ ನಿಂಗಪ್ಪ ಖೋಕಲೆ ಹಾಗೂ ಇತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 
          ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತೆಲಸಂಗ ಹಿರೇಮಠದ ಪೂಜ್ಯಶ್ರೀ ವೀರೇಶ್ವರ ದೇವರು ಹಾಗೂ ಶರಣ ವಿಚಾರ ವಾಹಿನಿಯ ಶರಣ ಶ್ರೀ ಆಯ್ ಆರ್ ಮಠಪತಿಯವರು ಆಶೀರ್ವಚನ ನೀಡಿದರು. 
      ಈ ಸಂದರ್ಭದಲ್ಲಿ ತಾಪಂ ಇಒ ಶಿವಾನಂದ ಕಲ್ಲಾಪೂರೆ, ಪ್ರಾಚಾರ್ಯ ಮಹಾಲಿಂಗ ಮೇತ್ರಿ, 
ಅಬುಬಕರ್ ಮುಲ್ಲಾ, ಆಕಾಶ ನಂದಗಾಂವ, ಅಲಗೌಡ ಪಾಟೀಲ, ಮುರಗೇಶ ಪಾಟೀಲ, ಶಶಿಧರ ಬರ್ಲಿ, ಶಿವಾನಂದ ಪಾಟೀಲ, ಮಲ್ಲಪ್ಪಾ ಮಾಳಿ, ಕುಮಾರ ಚನರಡ್ಡಿ, ಭೀಮಪ್ಪ ಕುಳ್ಳೋಳ್ಳಿ, ಪರಮೇಶ್ವರ ಚನರಡ್ಡಿ ರಮೇಶ ಅಥಣಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು. 
300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಅವರಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 5 ವಿದ್ಯಾರ್ಥಿಗಳು ಬಹುಮಾನಕ್ಕೆ ಭಾಜನರಾದರು.
ಪ್ರಥಮ ಬಹುಮಾನ: ಅನುಷ್ಕಾ ಬಿ. ನರೋಟೆ, ದ್ವಿತೀಯ ಬಹುಮಾನ: ಸೃಜನ್ ಎಸ್. ಮಾಳಿ, ಸಮರ್ಥ ಸದಾಶಿವ ಖೋತ
ತೃತೀಯ ಬಹುಮಾನ: ಪ್ರೀತಿ ಶ್ರೀಶೈಲ ಪಾಂಡ್ರೆ, ಮಹಾಂತೇಶ ಸಿದರಾಯ ಕಾರಜನಗಿ ಬಹುಮಾನ ಪಡೆದ ವಿದ್ಯಾರ್ಥಿಗಳಾಗಿದ್ದರು. 
      ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿಕೊಟ್ಟರು ಹನಮಂತ ಕುರಬರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಭಾರಿ ಮುಖ್ಯ ಶಿಕ್ಷಕರಾದ ಎಸ್ ಆಯ್ ಸಣಪೇಟಿ ಸ್ವಾಗತಿಸಿದರು, ಸಹ ಶಿಕ್ಷಕರಾದ ಎಮ್ ಎಮ್ ಬುರ್ಲಿಯವರು ನಿರೂಪಿಸಿ, ವಂದಿಸಿದರು. ಪ್ರೌಢಶಾಲೆಯ ಹಾಗೂ ವಿವಿಧ ಶಾಲೆಯ ಶಿಕ್ಷಕರು, ಗ್ರಾಮದ ಹಿರಿಯರು ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ : ಲಕ್ಷ್ಮಣ ಮೂಕಿ; 8618861316

Comments