ಬಳ್ಳಿಗೇರಿ (ಅಥಣಿ):ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ದಾಸಶ್ರೇಷ್ಠ ಸಂತ ಶ್ರೀ ಕನಕದಾಸರ 538ನೇ ಜಯಂತಿ ಭಕ್ತಿ, ಭಾವನೆ ಹಾಗೂ ಸಾಂಸ್ಕೃತಿಕ ಶ್ರದ್ಧೆಯೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿದ್ಯಾ ಸೂರ್ಯವಂಶಿ ಅವರು ಮಾತನಾಡಿ,
“ಕನಕದಾಸರು ಕೇವಲ ಕವಿ ಅಥವಾ ಸಂಗೀತಗಾರರಲ್ಲ, ಅವರು ಸಮಾಜದ ಹಿತವನ್ನು ಅಳವಡಿಸಿಕೊಂಡ ದಾಸ ಪರಂಪರೆಯ ಮಹಾನ್ ತಾತ್ವಿಕ ಚಿಂತಕರು. ಅವರು ತಮ್ಮ ಕೀರ್ತನೆಗಳ ಮೂಲಕ ಅಜ್ಞಾನ, ಅಸಮಾನತೆ, ಜಾತ್ಯಾತೀತತೆ ವಿರುದ್ಧ ಧ್ವನಿಸಿಬಂದವರು.
‘ನರಜನ್ಮ ದೊಳ್ಳೆಯೋ?’ ಎಂಬ ಕೀರ್ತನೆಯಲ್ಲಿ ಮಾನವೀಯ ಮೌಲ್ಯಗಳ ಪ್ರಾಮುಖ್ಯತೆಯನ್ನು ಸಾರಿದರೆ, ‘ಬಾಗಿಲು ತೇರೆಯಯ್ಯ ರಘುಮಂದಿರ’ ಎಂಬ ಕೀರ್ತನೆಯಲ್ಲಿ ಸಮಾನತೆ ಮತ್ತು ಸಮಾವೇಶದ ಸಂದೇಶವನ್ನು ನೀಡಿದ್ದಾರೆ” ಎಂದು ವಿವರಿಸಿದರು.
ಅವರು ಮುಂದುವರಿದು, “ಇಂದಿನ ಪೀಳಿಗೆ ಕನಕದಾಸರ ನೈತಿಕ ಬದುಕಿನಿಂದ ಸ್ಫೂರ್ತಿ ಪಡೆದು, ಸಾಮಾಜಿಕ ನ್ಯಾಯ, ಮಾನವೀಯತೆ ಹಾಗೂ ಸಮಾನತೆಯ ಮೌಲ್ಯಗಳನ್ನು ಕಾಪಾಡಬೇಕು. ಅವರ ಕೃತಿಗಳು ಕನ್ನಡ ಸಾಹಿತ್ಯದ ಕಣ್ಮಣಿ ಮಾತ್ರವಲ್ಲ, ನಮ್ಮ ಬದುಕಿಗೆ ಮಾರ್ಗದರ್ಶಕವೂ ಆಗಿವೆ. ಈ ಜಯಂತಿ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವ ದಿನವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಯಂಕಪ್ಪ ಸನದಿ, ಮಾಳಪ್ಪ ಶೆಂಡಗೆ, ಮಲ್ಲಿಕಾರ್ಜುನ ರೋಗಿ, ರವಿ ಕೌಲಗುಡ್ಡ, ಹಣಮಂತ ಬೆಳಗಲಿ, ಅಶೋಕ ಪಾಂಡ್ರೆ, ಪಿರಗೊಂಡ ಶೆಂಡಗೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಿ.ಎ. ಸಾವಡಕರ್, ಸಿಬ್ಬಂದಿ ಅಶೋಕ ದೊಡಮನಿ ಹಾಗೂ ಗ್ರಾಮದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ಲಕ್ಷ್ಮಣ ಮೂಕಿ
Comments
Post a Comment