ಭಾರಿ ಮಳೆಗೆ ಕಾಲುವೆ ತಡೆಗೋಡೆ ಕುಸಿತ — ಬೆಳೆ ಹಾನಿಯಿಂದ ರೈತರ ಆತಂಕ

ಇಂಡಿ : ತಡವಲಗಾ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಕಾಲುವೆಯ ತಡೆಗೋಡೆ ಕುಸಿದು ಜಮೀನಿನೊಳಗೆ ನೀರು ನುಗ್ಗಿದ ಘಟನೆ ನಡೆದಿದೆ. ಸ್ಥಳೀಯ ರೈತರ ಮಾಹಿತಿ ಪ್ರಕಾರ, ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತಡೆಗೋಡೆ ಒಡೆದು ನೀರು ನೇರವಾಗಿ ಹತ್ತಿರದ ಕೃಷಿ ಜಮೀನುಗಳಿಗೆ ಹರಿದು ಬೆಳೆಗಳಿಗೆ ಹಾನಿಯಾಗಿದೆ.

ಘಟನೆಯ ನಂತರ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ತುರ್ತು ಕ್ರಮದಿಂದ ಕಾಲುವೆಯ ಗೇಟ್ ಹಾಕಿ ನೀರು ನಿಲ್ಲಿಸಲಾಗಿದೆ. ಗ್ರಾಮಸ್ಥರು ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ.

ಜಮೀನಿನಲ್ಲಿ ಇನ್ನೂ ನೀರು ನಿಂತಿದ್ದು, ರೈತರು ಬೆಳೆ ನಷ್ಟದ ಅಂದಾಜು ಮಾಡಲು ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸುವಂತೆ ರೈತರು ಆಗ್ರಹಿಸುತ್ತಿದ್ದಾರೆ

UK FAST KANNADA NEWS 

Comments