ಅಥಣಿ: ಅಗಸ್ಟ್.05 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತನ್ನ ಸಂಘಟನಾ ಚಟುವಟಿಕೆಗಳಿಗೆ ಮತ್ತೊಂದು ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ. ಸಂಘಟನೆಯ ಕಾರ್ಯಾಲಯವನ್ನು ಅಕ್ಟೋಬರ್ 5, 2025ರಂದು ಭವ್ಯವಾಗಿ ಉದ್ಘಾಟಿಸಲಾಗುತ್ತಿದೆ. ಅಥಣಿಯ ಚೈನಿ ಆಸ್ಪತ್ರೆಯ ಹತ್ತಿರ ನಿರ್ಮಿತವಾಗಿರುವ ಈ ಕಾರ್ಯಾಲಯವನ್ನು ಬೆಳಿಗ್ಗೆ 11 ಗಂಟೆಗೆ ವಿಜೃಂಭಣೆಯಿಂದ ಉದ್ಘಾಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಮಹತ್ವದ ಕಾರ್ಯಕ್ರಮಕ್ಕೆ ರಾಜ್ಯ ರಾಜಕೀಯ ಕ್ಷೇತ್ರದ ಗಣ್ಯ ನಾಯಕರು ಸನ್ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ, ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಗವಾಡ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಭರಮಗೌಡ (ರಾಜು) ಕಾಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಅಲ್ಲದೆ ತಾಲೂಕು ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಥಣಿ ತಾಲೂಕ ಅಧ್ಯಕ್ಷರಾದ ಶ್ರೀ ಅಲ್ಲಾಹುದ್ದೀನ್ ಶೇಖ್ ಮಾಧ್ಯಮದೊಂದಿಗೆ ಹಂಚಿಕೊಂಡರು.
"ನಮ್ಮ ಸಂಘಟನೆ ಪತ್ರಕರ್ತರ ಧ್ವನಿಯಾಗಿ, ಮಾಧ್ಯಮದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸದಾ ತೊಡಗಿಸಿಕೊಂಡಿದೆ. ಹೊಸ ಕಚೇರಿ ಉದ್ಘಾಟನೆಯೊಂದಿಗೆ ಸಂಘಟನೆಯ ಚಟುವಟಿಕೆಗಳು ಇನ್ನಷ್ಟು ಬಲ ಪಡೆದು, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯ ಪಾಲ್ಗೊಳ್ಳಲು ಸಾಧ್ಯವಾಗಲಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ರೈತ ಮುಖಂಡರು, ಸಮಾಜ ಸೇವಕರು, ಬುದ್ಧಿಜೀವಿಗಳು, ನಾಗರಿಕರು ಮತ್ತು ವಿಶೇಷವಾಗಿ ತಾಲೂಕಿನ ಮಾಧ್ಯಮ ಮಿತ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲು ಮನವಿ ಮಾಡಲಾಗಿದೆ.
ಈ ಹೊಸ ಕಚೇರಿ ಉದ್ಘಾಟನೆ ಮೂಲಕ ಸಂಘಟನೆಯ ಕಾರ್ಯಚಟುವಟಿಕೆಗಳು ಹೊಸ ಹಾದಿ ಹಿಡಿಯಲಿದ್ದು, ಭವಿಷ್ಯದಲ್ಲಿ ಸಮಾಜಮುಖಿ ಕಾರ್ಯಗಳಿಗೆ ವೇದಿಕೆಯಾಗಿ ಪರಿಣಮಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
Comments
Post a Comment