🚨 ಗಡಿ ಜಿಲ್ಲೆ ಬೆಳಗಾವಿ ಮತ್ತೆ ಪ್ರವಾಹದ ಆತಂಕದಲ್ಲಿ ಮುಳುಗುತ್ತಿದೆ. ಸಾಮಾನ್ಯ ಜನತೆಗೆ ಆಡಳಿತದ ಮನವಿ:

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಸಪ್ತನದಿಗಳ ತೀರಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲೆಯಾದ್ಯಂತ ಎಚ್ಚರಿಕೆಯ ವಾತಾವರಣ ನಿರ್ಮಾಣವಾಗಿದೆ.

ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಿಸಿ ಮೊಹಮ್ಮದ್ ರೋಷನ್ ಅವರು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

👉 ಬೆಳಗ್ಗೆ 11 ಗಂಟೆಗೆ ಗೋಕಾಕ ತಾಲೂಕಿನ ಲೋಳಸೂರ ಬ್ರಿಜ್ ಬಳಿ ಪರಿಶೀಲನೆ ನಡೆಸಲಿದ್ದಾರೆ.

👉 ಮಧ್ಯಾಹ್ನ 12 ಗಂಟೆಗೆ ಗೋಕಾಕ ನಗರದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

👉 ನಂತರ ಗೊಡಚಿನ ಮಲ್ಕಿ ಪಾಲ್ಸ್ ಪ್ರದೇಶದ ಪ್ರವಾಹ ಪರಿಸ್ಥಿತಿ ವೀಕ್ಷಣೆ.

👉 ಮಧ್ಯಾಹ್ನ 2 ಗಂಟೆಗೆ ಮಾಂಜರಿ ಬ್ರಿಜ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ.

ಪ್ರವಾಹದಿಂದಾಗಿ ಕೃಷ್ಣಾ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಪಾತ್ರಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಹಳ್ಳ-ಹಳ್ಳಿ ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಜನರನ್ನು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಕೃಷ್ಣಾ ನದಿಯ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ಹತ್ತಿರದ ಹಳ್ಳಿಗಳು ಹಾಗೂ ನದಿ ತೀರದ ಜನತೆಗೆ ಮುಂಜಾಗ್ರತಾ ಸೂಚನೆ ನೀಡಲಾಗುತ್ತಿದೆ.

💧 ಸಾಮಾನ್ಯ ಜನತೆಗೆ ಆಡಳಿತದ ಮನವಿ:

ಅನಾವಶ್ಯಕವಾಗಿ ನದಿತೀರ ಪ್ರದೇಶಗಳಿಗೆ ಹೋಗಬಾರದು.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರಬೇಕು.

ಆಡಳಿತದ ಸೂಚನೆಗಳನ್ನು ಪಾಲಿಸಬೇಕು.


UK FAST KANNADA NEWS 

Comments