ಪತ್ರಕರ್ತರ ಸಂಘಟನೆಯ ಐಡಿ ವಿತರಣೆ: ಪದಾಧಿಕಾರಿಗಳ ಉತ್ಸಾಹಭರಿತ ಭಾಗವಹಣೆ /ಅಥಣಿ UK FAST KANNADA NEWS

ಅಥಣಿ : ಕರ್ನಾಟಕ ಕಾರ್ಯನಿರ್ವ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಗುರುವಾರ 31/07/2025 ರಂದು ಅಥಣಿ ತಾಲೂಕಿನಲ್ಲಿರುವ ಪತ್ರಕರ್ತರಿಗೆ ಗುರುತಿನ ಚೀಟಿಗಳ (ಐಡಿ ಕಾರ್ಡ್) ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರವಿ ಬಿ. ಕಾಂಬ್ಳೆ ಹಾಗೂ ಅಥಣಿ ತಾಲೂಕು ಅಧ್ಯಕ್ಷರಾದ ಅಲ್ಲಾಉದ್ದೀನ್ ಶೇಕ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ಲಕ್ಷ್ಮಣ ಮೂಕಿ, ಸಂತೋಷ ಹೋನಕಾಂಡೆ, ಉಮರ್ ಮುಮೀನ್, ರಶೀದ್ ಶೇಖ್, ಅಜಯ ಕಾಂಬಳೆ ಹಾಗೂ ಶಶಿಕಾಂತ್ ಪುಂಡಿಪಲ್ಲಿ
 ಅವರುಗಳು ಸಹ ಸಕ್ರಿಯವಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ರವಿ ಬಿ. ಕಕಾಂಬಳೆ ಅವರು, "ಅಥಣಿ ತಾಲೂಕಿನಲ್ಲಿ ಹಲವಾರು ರೀತಿಯ ಸಾಮಾಜಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳು ನಡೆಯುತ್ತಿವೆ. ಪತ್ರಕರ್ತರು ಈ ವಿದ್ಯಮಾನಗಳ ಬಗ್ಗೆ ಪರಿಶೀಲನೆ ನಡೆಸಿ, ಸತ್ಯಾಂಶಗಳನ್ನು ಬಹಿರಂಗ ಪಡಿಸಿ, ಸಾರ್ವಜನಿಕ ಹಾಗೂ ಸರಕಾರಿ ಅಧಿಕಾರಿಗಳಿಗೆ ಜವಾಬ್ದಾರಿಯುತವಾಗಿ ಸುದ್ದಿಯನ್ನು ತಲುಪಿಸುವ ಕೆಲಸ ಮಾಡಬೇಕು," ಎಂದು ತಿಳಿಸಿದರು.

ಅವರು ಮುಂದುವರಿಸಿ, "ಪತ್ರಕರ್ತರ ಧ್ವನಿ ಸಂಘಟನೆ ಮಾತ್ರವಲ್ಲದೆ, ಇದೊಂದು ಹಕ್ಕುಹೊಂದಿದ ವೇದಿಕೆ. ನಮ್ಮ ಎಲ್ಲ ಸದಸ್ಯರು ನ್ಯಾಯಮೂರ್ತಿಯಾಗಿ ವರದಿ ಮಾಡುವ ಹೊಣೆಗಾರಿಕೆ ಹೊಂದಿರಬೇಕು," ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.


UK FAST KANNADA NEWS 
ವರದಿ: ಲಕ್ಷ್ಮಣ ಮುಕಿ 8618861316

Comments