ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆ: ಅರಣ್ಯ ಅಧಿಕಾರಿ ಅಮಾನತ್ತು / UK FAST KANNADA NEWS

ಬೀದರ್:‌ ಕರ್ತವ್ಯ ನಿರತ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ದರ್ಪ ತೋರಿದ್ದ ಹೊನ್ನಿಕೇರಿ ವಲಯ ಗಸ್ತು ಅರಣ್ಯ ಪಾಲಕ ದಸ್ತಗಿರಿ ಸಾಬ್ ಅವರನ್ನು ಅಮಾನತ್ತುಗೊಳಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ದೃಶ್ಯಾವಳಿಗಳು ಮತ್ತು ಪತ್ರಿಕೆಗಳಲ್ಲಿನ ವರದಿ ಆಧರಿಸಿ ಈ ಕ್ರಮ ಜರುಗಿಸಲಾಗಿದೆ. ಇಲಾಖೆ ವಿಚಾರಣೆ ಕಾಯ್ದರಿಸಿ, ಕರ್ನಾಟಕ ಸಿವಿಲ್ ನಿಯಮಗಳು 1957ರ ನಿಯಮ 10 (1) ಅನ್ವಯ ಗುರುವಾರ (ಏ.17) ಈ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ನಿರ್ವಹಿಸುವಾಗ ದಸ್ತಗಿರಿ ಸಾಬ್ ಅವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು ಉಲ್ಲಂಘಿಸಿ ಕರ್ತವ್ಯದಲ್ಲಿ ಅಶಿಸ್ತು ತೋರಿದ್ದಾರೆ. ಸದರಿ ಘಟನೆಯ ಬಗ್ಗೆ ಕೂಲಂಕುಶ ತನಿಖೆ ನಡೆದು, ಪ್ರಕರಣ ಸತ್ಯಾಸತ್ಯತೆ ತಿಳಿಯಬೇಕಾಗಿದೆ. ಅಧಿಕಾರಿ ಅದೇ ಸ್ಥಳದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನಿಪ್ಪಕ್ಷಪಾತ ತನಿಖೆಗೆ ಅಡ್ಡಿಯಾಗುವ ಸಂಭವ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

UK FAST KANNADA NEWS 

Comments