ಬೆಳಗಾವಿ: ಕೊಟ್ಟಲಗಿ ಅಮ್ಮಾಜೇಶ್ವರ ಏತ ನೀರಾವರಿ ಶಂಕುಸ್ಥಾಪನ ಕಾರ್ಯಕ್ರಮಕ್ಕೆ CM ಸಿದ್ದರಾಮಯ್ಯ ಹಾಗೂ DCM ಡಿಕೆ ಶಿವಕುಮಾರ್ ಚಾಲನೆ ನೀಡಿದರು

ಬೆಳಗಾವಿ‌ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ DK Shivakumar ಇವರ ನೇತ್ರತ್ವದಲ್ಲಿ ನಡೆದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಥಣಿ ತಾಲೂಕಿನ ಪೂರ್ವಭಾಗದ ಎತ್ತರ ಪ್ರದೇಶದಲ್ಲಿ ನೀರಾವರಿ ವಂಚಿತ ಜಮೀನುಗಳಿದ್ದು, ಈ ಯೋಜನೆಯ ಮೂಲಕ ಒಳಹರಿವಿನ ಕೊರತೆಯಿರುವ ಕೆರೆಗಳ, ಜನ-ಜಾನುವಾರುಗಳಿಗೆ ನೀರು ಕಲ್ಪಿಸುವ ಟರ್ನ್ ಕೀ ಯೋಜನೆಯಾಗಲಿದೆ‌.

ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಹತ್ತಿರವಿರುವ ಕೃಷ್ಣಾನದಿಯ ಎಡದಂಡೆ ಮೂಲದಿಂದ 2.903 ಟಿ.ಎಂ.ಸಿ ನೀರನ್ನು ನೀರಾವರಿಯಿಲ್ಲದ ಸುಮಾರು 19274 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಿದೆ.

ಸದರಿ ಯೋಜನೆಯಿಂದ ತೆಲಸಂಗ, ಖಿಲಾರದಡ್ಡಿ, ಭೋಸಲೆವಾಡಿ, ಕನ್ನಾಳ, ಬನ್ನೂರು, ಕಕಮರಿ ಮತ್ತು ಕೊಟ್ಟಲಗಿ ಹಾಗೂ ಕರಿಮಸೂತಿ ಏತ ನೀರಾವರಿ ಪೂರ್ವ ಭಾಗದ ನೀರಾವರಿಯಿಂದ ಬಳಲುತ್ತಿರುವ ಕ್ಷೇತ್ರದ ಐಗಳಿ, ಬಾಡಗಿ, ಅರಟಾಳ, ರಾಮತೀರ್ಥ, ಬಾವಣದಡ್ಡಿ, ಪಡತರವಾಡಿ ಮುಂತಾದ ಗ್ರಾಮಗಳಿಗೆ ಹಾಗೂ 13 ಕೆರೆಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.

ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶಣ್ಣ ಜಾರಕಿಹೊಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ‌ ಮೂಲ ಸೌಲಭ್ಯ ಸಚಿವರಾದ ಎಂ.ಬಿ.ಪಾಟೀಲ, ಸರ್ಕಾರಿ‌ ಮುಖ್ಯ ಸಚೇತಕರು ಹಾಗೂ ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ ಪಟ್ಟಣ, ವಿಧಾನ ಪರಿಷತ್ ಸದಸ್ಯರಾದ ಚೆನ್ನರಾಜ್ ಹಟ್ಟಿಹೊಳೆ, ಮಹಾರಾಷ್ಟ್ರ ರಾಜ್ಯದ ಶಾಸಕರುಗಳಾದ ವಿಶ್ವಜೀತ್ ಕದಂ, ವಿಕ್ರಂ ದಾದಾ ಸಾವಂತ, ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ್, ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮಣ್ಣವರ, ಜಮಖಂಡಿಯ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಜಿಲ್ಲೆಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Comments