ಕಳ್ಳತನಕ್ಕೆ ಬಂದ ಮೂವರು ಅಂತರರಾಜ್ಯ ಕಳ್ಳರನ್ನ ಸಿನಿಮೆಯ ರೀತಿಯಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರು ಬಂಧಿಸಿದ್ದಾರೆ, UK FAST KANNADA NEWS
ಅಥಣಿ : ಕಳ್ಳತನಕ್ಕೆ ಬಂದ ಮೂವರು ಅಂತರರಾಜ್ಯ ಕಳ್ಳರನ್ನು ಗ್ರಾಮಸ್ಥರು ಹಾಗೂ ಪೊಲೀಸರು ಬಂಧಿಸಿದ ಘಟನೆ ಅಥಣಿ ತಾಲೂಕಿನ ಬಡಚ್ಚಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕಳ್ಳತನಕ್ಕೆ ಬಂದ ಐದು ಜನ ಕಳ್ಳರ ಗ್ಯಾಂಗ್ ನ್ನು ತಡರಾತ್ರಿ ಮೂರು ಜನ ಕಳ್ಳರನ್ನು ಹಿಡಿದ ಗ್ರಾಮಸ್ಥರ ಕಾರ್ಯ ಮೆಚ್ಚುವಂಥದ್ದು. ಗ್ರಾಮಸ್ಥರು ನೋಡುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದಾಗ ತಕ್ಷಣವೇ ಪೊಲೀಸರು ಗ್ರಾಮಸ್ಥರು ಸೇರಿಕೊಂಡು ಕಾರ್ಯಾಚರಣೆ ನಡೆಸಿ ಮೂವರು ಮನೆಗಳ್ಳರು ಪೊಲೀಸರ ವಶಕ್ಕೆ, ಇಬ್ಬರು ಪರಾರಿಯಾಗಿದ್ದಾರೆ. ದರೋಡೆಕೋರ ಬಳಿ ಕಂಟ್ರಿ ಪಿಸ್ತೂಲು ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಮಹಾರಾಷ್ಟ್ರ ಮೂಲದ ದರೋಡೆಕೋರರೆಂದು ಪೋಲಿಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ವರದಿ: ಲಕ್ಷ್ಮಣ ಮೂಕಿ,8618861316