ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗವಾಗಿರುವ ಜತ್ತ ಕ್ಷೇತ್ರದಲ್ಲೂ ನವೆಂಬರ್ 20ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಅವರು, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇನೆ. ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ಈ ಕ್ಷೇತ್ರದ ಏಳ್ಗೆಗಾಗಿ ನನ್ನದೇಯಾದ ರೀತಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಕೈಗೊಂಡಿದ್ದೇನೆ.
ಇದನೆಲ್ಲ ಗಮನಿಸಿ ಪಕ್ಷದ ನಾಯಕರು ನನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನಗೆ ಪಕ್ಷವು ಟಿಕೆಟ್ ನೀಡದೆ ಹೋದರೆ ಹೊರಗಿನವರಿಗೆ ಅವಕಾಶ ಮಾಡಿಕೊಟ್ಟರೆ. ನನ್ನ ಕ್ಷೇತ್ರದ ಸ್ವಾಭಿಮಾನಿ ಜನರಿಗೋಸ್ಕರ, ಕ್ಷೇತ್ರದ ಬಡ,ನೊಂದವರ, ರೈತರ ಹಾಗೂ ಯುವಕರ ಭವಿಷ್ಯದ ದೃಷ್ಟಿಯಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಾಜಿ ಶಾಸಕ ವಿಲಾಸ್ ರಾವ್ ಜಗತಾಪ್, ಬಸವಸೇನಾ ಅಧ್ಯಕ್ಷ ಬಸವರಾಜ ಪಾಟೀಲ್, ನಗರ ಸೇವಕ ಹಾಗೂ ಧನಗರ್ ಸಮಾಜದ ನಾಯಕ ಲಕ್ಷ್ಮಣ ಎಡಕೆ, ರಾಮನಿಂಗ್ ನಿವರಗಿ, ಸೋರಡಿ ಗ್ರಾಮ ಪಂಚಾಯತ ಅಧ್ಯಕ್ಷ ತಾನಾಜಿ ಪಾಟೀಲ್ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದಂತೆ ತಮ್ಮನಗೌಡ ರವಿ ಪಾಟೀಲ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಲಕ್ಷ್ಮಣ ಮೂಕಿ,8618861316
Comments
Post a Comment