ಮಹಾರಷ್ಟ್ರ ಸಾಂಗ್ಲಿ : ಗೆಳೆಯರ ಜೊತೆ ತಂದೆ ಮನೆಯಲ್ಲಿ ಆಡುವ ಆಟವನ್ನೇ ಇಷ್ಟಪಟ್ಟು 6ನೇ ವಯಸ್ಸಿನಲ್ಲಿ ಚೆಸ್ ಆಟವನ್ನು ಆಡುವ ಮೂಲಕ ಈ ಪುಟ್ಟ ಬಾಲಕಿ ಸಾಧನೆಯ ಹಾದಿಯಲ್ಲಿದ್ದಾಳೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಶ್ರಿಯಾ ಹಿಪ್ಪರಗಿ ಎನ್ನುವ ಬಾಲಕಿ 6ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಇಸ್ಲಾಂಪುರದಲ್ಲಿ ಚೆಸ್ ಆಟ ಆಡುವ ಮೂಲಕ ಪ್ರಾರಂಭಿಸಿದ್ದಳು.
ಮುಂದಿನ ದಿನಗಳಲ್ಲಿ ರಾಜ್ಯ ಅಂತ ರಾಜ್ಯ ದೇಶ ವಿದೇಶಗಳಲ್ಲಿ ಆಟ ಆಡುವ ಮೂಲಕ 300ಕ್ಕೂ ಹೆಚ್ಚು ಅವಾರ್ಡ್ಸ್ ಗೆದ್ದು ಎಲ್ಲರೂ ಗಮನ ಸೇಳದಿದ್ದಾಳೆ.
ತಂದೆ ಶಿಕ್ಷಕರಾಗಿದ್ದು ತಾಯಿ ಗ್ರಹಣಿಯಾಗಿದ್ದು ಈ ಪುಟ್ಟ ಬಾಲಕಿಯ ಈ ಮಟ್ಟಕ್ಕೆ ಬರುವುದಕ್ಕೆ ತಂದೆ ತಾಯಿ ಮತ್ತು ಸಂಬಂಧಿಕರ ಹೆಚ್ಚಿನ ಪ್ರೋತ್ಸಾಹವೇ ಕಾರಣ.
6ನೇ ವಯಸ್ಸಿನಲ್ಲಿ ಚೆಸ್ ಆಟ ಆಡುವುದನ್ನು ಪ್ರಾರಂಭ ಮಾಡಿದ ಪುಟ್ಟ ಬಾಲಕಿ 13ನೇ ವಯಸ್ಸಿನವರೆಗೆ 300ಕ್ಕೂ ಹೆಚ್ಚು ಅವಾರ್ಡ್ಸ್ ಹಾಗೂ 150ಕ್ಕೂ ಹೆಚ್ಚು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಚೆಸ್ ಲೋಕದಲ್ಲಿ ಸಾಧನೆಗಳ ಮಾಡಿದ್ದಾಳೆ.
ಇನ್ನು ಈ ಬಾಲಕಿ ಒಲಂಪಿಕ್ ನಲ್ಲಿ ಚಿನ್ನದ ಪದವನ್ನು ಗೆಲ್ಲುವ ಕನಸನ್ನು ಕಾಣುತ್ತಿದ್ದಾಳೆ ಇವಳಿಗೆ ಅವರ ತಂದೆ ತಾಯಿ ಹೆಚ್ಚಿನ ಪ್ರೋತ್ಸಾಹದಿಂದ ಈ ಬಾಲಕಿಗೆ ಇದುವರೆಗೂ ಜಾರ್ಜಿಯಾ ಇಂಡೋನೇಷಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಆಟವಾಡಿ ಮೊದಲ ಸ್ಥಾನದಲ್ಲಿ ವಿಜಯ ಪತಾಕೆಯನ್ನು ಹಾರಿಸಿದ್ದಾಳೆ.
ಮತ್ತೆ ಮುಂದಿನ ತಿಂಗಳಲ್ಲಿ ಕಜಕಸ್ಥಾನ ಶ್ರೀಲಂಕಾ ಹಾಗೂ ಬ್ರಾಜಿಲ್ ಇನ್ನೂ ಈ ದೇಶದಲ್ಲಿ ಚೆಸ್ ಆಟದಲ್ಲಿ ಆಯ್ಕೆಯಾಗಿದ್ದಾಳೆ .
ಇಂಥ ಒಳ್ಳೆಯ ಪ್ರತಿಭೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಇರುವುದರಿಂದ ಎರಡು ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊಂದಿಗೆ ಒಲಂಪಿಕ್ ನಲ್ಲಿ ಆಟ ಆಡುವುದಕ್ಕೆ ಸರ್ಕಾರದ ನೆರವು ಕೇಳುತ್ತಿದ್ದಾರೆ .
UK FAST KANNADA NEWS
ವರದಿ : ಲಕ್ಷ್ಮಣ ಮೂಕಿ (ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ; 8618861316
Comments
Post a Comment