Belagavi : ಸಂಕ್ರಮ ಹೋಟೆಲ್ ನಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಉದ್ಘಾಟನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವೆ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಸಮಾಜ ಸುಧಾರಣೆಯಲ್ಲಿ ದೊಡ್ಡ ಜವಾಬ್ದಾರಿಯ ಪಾತ್ರ ಮಾಧ್ಯಮದವರಾದಾಗಿದೆ. ಪತ್ರಕರ್ತರಾದವರು ಕೇವಲ ಸುದ್ದಿ ಮಾಡುವುದು ಮುಖ್ಯವಲ್ಲ, ಸಾಮಾಜಿಕ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯಿಂದ ವರದಿಗಳನ್ನು ಮಾಡಬೇಕು ವಿಶ್ವದ ಯಾವುದೇ ಮೂಲೆಯಲ್ಲಿ ಬಾಂಬು ಬಿದ್ದರೂ ಕ್ಷಣಾರ್ಧದಲ್ಲಿ ಸುದ್ದಿ ಯಾರಾದರೂ ಮಾಡುತ್ತಿದ್ದರೆ ಅದು ಡಿಜಿಟಲ್ ಮೀಡಿಯಾ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು,
ಬೆಳಗಾವಿ ಪಟ್ಟಣದ ಸಂಕಮ್ ಹೋಟೆಲ್ ನಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಿಜಿಟಲ್ ಮಾಧ್ಯಮ ಅತ್ಯಂತ ವೇಗವಾದ ಮಾಧ್ಯಮವಾಗಿದೆ, ನನ್ನ ರಾಜಕೀಯಲ್ಲಿ ನಾನು ಏನಾದರೂ ಯಶಸ್ಸು ಕಂಡಿದ್ದರೆ ಅದು ಮಾಧ್ಯಮದವರಿಂದಾಗಿ ಎಂದು ಹೇಳಿದರು, ವಿಶ್ವದಲ್ಲಿ ನಡೆಯುವ ಎಲ್ಲಾ ಪ್ರಚಲಿತ ಘಟನೆಗಳನ್ನು ಕ್ಷಣಾರ್ಧದಲ್ಲಿ ಬಿತ್ತರಿಸುವ ಮಾಧ್ಯಮ ಯಾವುದಾದರೂ ಇದ್ದರೆ ಅದು ಡಿಜಿಟಲ್ ಮಾಧ್ಯಮ.ದಕ್ಷಿಣ ಭಾರತದಲ್ಲಿ ಮೊದಲ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಹಾಗೂ ಭಾರತದ ಮೂರನೇ ಡಿಜಿಟಲ್ ಅಸೋಸಿಯೇಷನ್ ಬೆಳಗಾವಿಯಲ್ಲಿ ಉದ್ಘಾಟನೆಯಾಗಿದ್ದು ಸಂತಸವೆನಿಸುತ್ತಿದೆ ಎಂದು ಅವರು ಹೇಳಿದರು.
ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಉಪಾಧ್ಯಕ್ಷ ರತ್ನಾಕರ ಗೌಂಡಿ ಮಾತನಾಡಿ ಡಿಜಿಟಲ್ ಮಾಧ್ಯಮದವರ ಅವಶ್ಯಕತೆ ಪ್ರಚಾರ ತೆಗೆದುಕೊಳ್ಳುವ ತನಕ ಅಷ್ಟೇ ಹೊರತು, ಸೌಲಭ್ಯಗಳು ಅಂತ ಕೇಳಿದಾಗ ನಿಮ್ಮ ಕೆಟಗರಿನೇ ಇಲ್ಲ ಅಂತ ನಮ್ಮನ್ನ ಕಡೆಗಣಿಸುತ್ತಿದ್ದಾರೆ. ವಾರ್ತಾ ಇಲಾಖೆಯಲ್ಲಿ ನಮ್ಮನ್ನ ಸೇರಿಸಬೇಕು ಹಾಗೂ ಕರ್ನಾಟಕ ಸರ್ಕಾರದಿಂದ ಪತ್ರಕರ್ತರಿಗೆ ನೀಡುವ ಸೌಲಭ್ಯ, ಸವಲತ್ತುಗಳನ್ನು ಕೊಡಬೇಕು. ಪ್ರಿಂಟ್ ಮೀಡಿಯಾ, ಟಿವಿ ಮೀಡಿಯಾದವರಿಗೆ ನೀಡುವ ಸ್ಥಾನಮಾನ ನಮಗೂ ಸಿಗಬೇಕು ಎಂದು ಸಚಿವರಿಗೆ ಹಾಗೂ ಶಾಸಕರಿಗೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಶ್ರೀ ರಾಜು (ಆಸಿಫ್ )ಸೇಠ, ಬಿಜೆಪಿ ರಾಜ್ಯ ವಕ್ತಾರ ಎಫ್ಎಸ್ ಸಿದ್ದನಗೌಡ, ಜೆಡಿಎಸ್ ಮುಖಂಡ ಪ್ರಮೋದ್ ಪಾಟೀಲ್, ಹಿರಿಯ ಪತ್ರಕರ್ತ ಪ್ರಕಾಶ್ ಬೆಳಗುಜಿ, ಡಿಜಿಟಲ್ ನ್ಯೂಸ್ ಅಸೋಸಿಯೇಷನ್ನ
ಸಿಇಓ ಪ್ರಸಾದ ಕಂಬಾರ,ವಕ್ತಾರ ಇಕ್ಬಾಲ ಜಕಾತಿ,
ವರ್ಕಿಂಗ್ ಕಮೀಟಿ ಅಧ್ಯಕ್ಷ್ಯ ಮಹಾದೇವ ಪವಾರ್, ಕಾರ್ಯದರ್ಶಿ ಕೃಷ್ಣ ಸಿಂದೆ,ಕೋ-ಆರ್ಡಿನೇಟರ್ ದೀಪಕ್ ಸುತಾರ್ ಹಾಗೂ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ನ ರಾಜ್ಯದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
UK FAST KANNADA NEWS
Comments
Post a Comment