ಅಥಣಿ : ಪಟ್ಟಣದ ಮೀರಜ ರಸ್ತೆಯಲ್ಲಿನ ಛತ್ರಪತಿ ಶಿವಾಜಿ ವೃತ್ತದಲ್ಲಿ ಇಂದು ಬೆಳಗ್ಗೆ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿಯವರು ಪಾಲ್ಗೊಂಡು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ, ದೇಶಭಕ್ತಿ, ಅವರ ಶೌರ್ಯ ಸಾಹಸ ಎಂದಿಗೂ ಮರೆಲಾಗದು. ದೇಶದ ಇತಿಹಾದಲ್ಲಿ ಶಿವಾಜಿ ಮಹಾರಾಜರ ಪಾತ್ರ ಬಹುಮುಖ್ಯವಾದದ್ದು. ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರ ಕಟ್ಟಿದ ಮಹಾನ್ ನಾಯಕರಾಗಿದ್ದಾರೆ. ಆದ್ದರಿಂದ ಅವರ ಕೀರ್ತಿ ದೇಶವ್ಯಾಪಿ ಹರಡಿದೆ. ಶಿವಾಜಿ ಮಹಾರಾಜರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ಬಗ್ಗೆ ತಿಳಿಸಬೇಕು ಎಂದು ಚಿದಾನಂದ ಸವದಿ ಹೇಳಿದರು.
ಮಾಜಿ ಶಾಸಕರಾದ ಶ್ರೀ ಶಹಜಹಾನ್ ಡೊಂಗರಗಾಂವ, ಮುಖಂಡರಾದ ದಿಗ್ವಿಜಯ ಪವಾರ ದೇಸಾಯಿ,ಚಂದ್ರಕಾಂತ ಇಮ್ಮಡಿ, ಶ್ರೀಶೈಲ ನಾಯಿಕ, ಬಸವರಾಜ ಬುಟಾಳಿ, ಮರಾಠಾ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ವಿನಾಯಕ ದೇಸಾಯಿ, ಮರಾಠಾ ಸಮಾಜದ ಮುಖಂಡರಾದ ಶ್ರೀ ಸಂದೀಪ ಪಾಟೀಲ, ಶ್ರೀ ಬಾಹುಸಾಹೇಬ ಜಾಧವ, ರವಿ ದೇಸಾಯಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ದತ್ತಾ ವಾಸ್ಟರ, ರಾಜು ಗುಡೋಡಗಿ, ಮಲ್ಲೇಶ ಹುದ್ದಾರ, ವಿಲೀನರಾಜ ಯಳಮಲಿ ಹಾಗೂ ರಾಜು ಬುಲಬುಲೆ, ಆಸೀಫ ತಾಂಬೋಳಿ, ಸಾಹಿತಿಗಳಾದ ಅಪ್ಪಾಸಾಬ ಅಲಿಬಾದಿ, ಶಿವಕುಮಾರ ಅಪರಾಜ ಸೇರಿದಂತೆ ಮತ್ತಿತರ ಗಣ್ಯಮಾನ್ಯರು, ಅಥಣಿ ಹಾಗೂ ಕಾಗವಾಡ ತಾಲೂಕಿನ ಮರಾಠಾ ಸಮಾಜ ಮುಖಂಡರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
UK FAST KANNADA NEWS
Comments
Post a Comment