ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳಿಗೆ ನಡೆದ ಚುಣಾವಣೆಯಲ್ಲಿ ಜಿನ್ನಪ್ಪ ಆಸ್ಕಿಯವರ ಸ್ವಾಭಿಮಾನಿ ರೈತ ಫೆನಲ್ ಬಹುಮತದ ಫಲಿತಾಂಶ ಗಳಿಸುವ ಮೂಲಕ ಭರ್ಜರಿ ಗೆಲುವಿನ ನಗೆ ಬಿರಿದರು.
ಸ್ವಾಭಿಮಾನಿ ರೈತ ಫೆನಲ್ ನ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹಾರೂಗೇರಿಯ ಜನತಾ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಪಾಟೀಲರು ಗೆದ್ದ 7 ಜನ ಸದಸ್ಯರನ್ನು ಅಭಿನಂದಿಸಿದರು.
ಬೆಳಿಗ್ಗೆ 10 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಸಂಘದ ಸಭಾ ಭವನದಲ್ಲಿ ನಡೆದ ಚುನಾವನಾ ಎಣಿಕೆ ಮುಗಿದು ಫಲಿತಾಂಶ ಹೊರ ಬೀಳುವವರೆಗೆ ಹಾರೂಗೇರಿ ಸಿಪಿಐ ಮತ್ತು ಪಿಎಸ್ಐ ನೈತ್ವದಲ್ಲಿ ಪೋಲಿಸ್ ರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಣಿಕೆ ಪ್ರಕ್ರಿಯೆ ಮಗಿದು ಪಲಿತಾಂಶ ಹೊರಬೀಳುತ್ತಿರುವಂತೆ ಚುಣಾಯಿತ ಪ್ರತಿನಿಧಿಗಳ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಒಬ್ಬರಿಗೊಬ್ಬರು ಗುಲಾಲ ಎರಚಿ ಜಯಘೋಷ ಹಾಕುವ ಮೂಲಕ ಸಂಭ್ರಮಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ಸದಸ್ಯರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸ್ವಾಭಿಮಾನಿ ರೈತ ಫೆನಲ್ ನ 7 ಜನ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವುದರೊಂದಿಗೆ ಭರ್ಜರಿ ಗೆಲುವು ಸಾಧಿಸಿದರು.
ರೈತ ಹಿತರಕ್ಷಣಾ ಫೆನಲ್ ನ ಡಿ. ಸಿ. ಸದಲಗಿಯವರ ಕಪಿಮುಷ್ಟಿಯಲ್ಲಿದ್ದ ಹಳೆ ಸೊಸೈಟಿಯು ಜಾರಿ ಸ್ವಾಭಿಮಾನಿ ರೈತ ಫೆನಲ್ ಕೈ ಸೇರಿತು.
ಈ ಸಂದರ್ಭದಲ್ಲಿ ರಾಮಣ್ಣ ಗಸ್ತಿ, ಧನಪಾಲ ಶಿರಹಟ್ಟಿ, ಶ್ರೀಶೈಲ ಉಮರಾಣಿ, ಅಶೋಕ ಅಸ್ಕಿ, ಬ್ರಹ್ಮಾದೇವ ಹಳ್ಳೂರ, ರಾಜು ಅಸ್ಕಿ, ಪುರಸಭೆ ಸದಸ್ಯ ಬಸವರಾಜ ಚೌಗಲಾ, ಮುತ್ತಪ್ಪ ಗಸ್ತಿ, ಸಿದ್ದು ಬನಾಜ ಉಪಸ್ಥಿತರಿದ್ದರು.
ವರದಿ: ಸಿದ್ದರಾಮ ಗೌಡ ಪಾಟೀಲ್ ಯುಕೆ ಫಾಸ್ಟ್ ಕನ್ನಡ ನ್ಯೂಸ್
Comments
Post a Comment