ವಿಜಯಪುರ,ಶತಮಾನದ ಶ್ರೇಷ್ಠ ಸಂತರಾದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನಮಹೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದೆ “ಅವರ ಸರಳ ಸಜ್ಜನಿಕೆ ನನ್ನ ಜೀವನದುದ್ದಕ್ಕೂ ಪ್ರೇರಣೆಯಾಗಿದೆ. ತಮ್ಮ ಪ್ರವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯವನ್ನು ಅವರು ನಿರಂತರವಾಗಿ ಮಾಡಿದ್ದಾರೆ. ಅವರು ಭೌತಿಕವಾಗಿ ಕಣ್ಮರೆಯಾಗಿದ್ದರೂ ಇಲ್ಲಿನ ಪರಿಸರದಲ್ಲಿ ಅವರು ಜೀವಿಸುತ್ತಿದ್ದಾರೆಂಬ ಭಾವನೆ ನಮ್ಮಲ್ಲಿದೆ."
"ಪೂಜ್ಯ ಶ್ರೀಗಳವರ ಹೆಸರಿನಲ್ಲಿ 1,000 ಎಕರೆ ಪ್ರದೇಶದಲ್ಲಿ ಅರಣ್ಯ ನಿರ್ಮಾಣವಾಗಬೇಕಿದೆ. ಪೂಜ್ಯ ಕಾನೇರಿ ಶ್ರೀಗಳು, ಪೂಜ್ಯ ಸಿರಿಗೆರೆ ಶ್ರೀಗಳವರು ಇದೇ ಆಶಯ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ನೆರವು, ಮಾರ್ಗದರ್ಶನದಲ್ಲಿ ಇದನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಂತೆಯೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಹೆಸರಿನಲ್ಲಿ ವಿಜ್ಞಾನ ಸಂಗ್ರಹಾಲಯವಾಗಬೇಕು. ಅವರ ಹೆಸರು ಅಜರಾಮರಗೊಳಿಸುವ ಕೆಲಸವಾಗಬೇಕು!” ಎಂಬಿ ಪಾಟೀಲ್ ಹೇಳಿದರು.
ಪೂಜ್ಯ ಸಂತರುಗಳು, ಜನಪ್ರತಿನಿಧಿಗಳು, ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments
Post a Comment