ಕೊಕಟನೂರ ಗ್ರಾಮದಲ್ಲಿ ಸೇತುವೆ-ಬಾಂದಾರ ಕಾಮಗಾರಿ ಉದ್ಘಾಟಿಸಿದ ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ
ಅಥಣಿ : ತಾಲೂಕಿನ ಕೊಕಟನೂರ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹಿರೇಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮತ್ತು ಬಾಂದಾರ ಕಾಮಗಾರಿಯನ್ನು ದಿ. 25-12-24 ರಂದು ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿದರು . ಇದೇ ಸಂದರ್ಭದಲ್ಲಿ ಹಿರೇಹಳ್ಳಕ್ಕೆ ಬಾಗಿನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ .ಪಂ. ಅಧ್ಯಕ್ಷೆ ಶಾನವ್ವ ಪೂಜಾರಿ, ಉಪಾಧ್ಯಕ್ಷರಾದ ಅರ್ಜುನ ಪೂಜಾರಿ, ಮುಖಂಡರಾದ ಸುಭಾಸ ಸೋನಕರ, ವಿಶಾಲ ದೇಸಾಯಿ, ಸುರೇಶ ಪೂಜಾರಿ, ಮಾನಸಿಂಗ ಮಗರ, ಅನಿಲ ಮುಳಿಕ, ನಿಂಗಣ್ಣ ಪರಾಂಡೆ, ವಿರೇಂದ್ರ ಹಳಕಿ, ಅಶೋಕ ಸಿದ್ದಣ್ಣವರ, ಶ್ರೀಶೈಲ ಕಾಡದೇವರಮಠ, ಸೋಮೇಶ ಜೋಶಿ, ಮುಖಂಡರು, ನ್ಯಾಯವಾದಿಗಳಾದ ಶ್ರೀ ಎ.ಎಮ್ . ಖೊಬ್ರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ಹುಣಸೀಕಟ್ಟಿ, ಸಹಾಯಕ ಇಂಜಿನಿಯರ್ ವಿನಯ ಕೋಳಿ ಗುತ್ತಿಗೆದಾರರಾದ ಐ.ಎಸ್. ಮಟಗಾರ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
UK FIRST
Comments
Post a Comment