ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳಿಗೆ ನಡೆದ ಚುಣಾವಣೆಯಲ್ಲಿ ಜಿನ್ನಪ್ಪ ಆಸ್ಕಿಯವರ ಸ್ವಾಭಿಮಾನಿ ರೈತ ಫೆನಲ್ ಬಹುಮತದ ಫಲಿತಾಂಶ ಗಳಿಸುವ ಮೂಲಕ ಭರ್ಜರಿ ಗೆಲುವಿನ ನಗೆ ಬಿರಿದರು. ಪೂರ್ತಿ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ https://youtu.be/-FhAOaMlljU ಸ್ವಾಭಿಮಾನಿ ರೈತ ಫೆನಲ್ ನ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹಾರೂಗೇರಿಯ ಜನತಾ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಪಾಟೀಲರು ಗೆದ್ದ 7 ಜನ ಸದಸ್ಯರನ್ನು ಅಭಿನಂದಿಸಿದರು. ಬೆಳಿಗ್ಗೆ 10 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಸಂಘದ ಸಭಾ ಭವನದಲ್ಲಿ ನಡೆದ ಚುನಾವನಾ ಎಣಿಕೆ ಮುಗಿದು ಫಲಿತಾಂಶ ಹೊರ ಬೀಳುವವರೆಗೆ ಹಾರೂಗೇರಿ ಸಿಪಿಐ ಮತ್ತು ಪಿಎಸ್ಐ ನೈತ್ವದಲ್ಲಿ ಪೋಲಿಸ್ ರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಣಿಕೆ ಪ್ರಕ್ರಿಯೆ ಮಗಿದು ಪಲಿತಾಂಶ ಹೊರಬೀಳುತ್ತಿರುವಂತೆ ಚುಣಾಯಿತ ಪ್ರತಿನಿಧಿಗಳ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಒಬ್ಬರಿಗೊಬ್ಬರು ಗುಲಾಲ ಎರಚಿ ಜಯಘೋಷ ಹಾಕುವ ಮೂಲಕ ಸಂಭ್ರಮಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ಸದಸ್ಯರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸ್ವಾಭಿಮಾನಿ ರೈತ ಫೆನಲ್ ನ 7 ಜನ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವುದರೊಂದಿಗೆ ಭರ್...
ಲಕ್ಷ್ಮಣ ಮೂಕಿ ಸಾರಥ್ಯದಲ್ಲಿ ಉತ್ತರ ಕರ್ನಾಟಕದ ಫಾಸ್ಟ್ ಕನ್ನಡ ನ್ಯೂಸ್