Skip to main content

Posts

Showing posts from February, 2024

ಅಥಣಿ : ಪಟ್ಟಣದ ಛತ್ರಪತಿ ಶಿವಾಜಿ ವೃತ್ತದಲ್ಲಿ ಇಂದು ಬೆಳಗ್ಗೆ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಅಥಣಿ : ಪಟ್ಟಣದ ಮೀರಜ ರಸ್ತೆಯಲ್ಲಿನ ಛತ್ರಪತಿ ಶಿವಾಜಿ ವೃತ್ತದಲ್ಲಿ ಇಂದು ಬೆಳಗ್ಗೆ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿಯವರು ಪಾಲ್ಗೊಂಡು ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ, ದೇಶಭಕ್ತಿ, ಅವರ ಶೌರ್ಯ ಸಾಹಸ ಎಂದಿಗೂ ಮರೆಲಾಗದು. ದೇಶದ ಇತಿಹಾದಲ್ಲಿ ಶಿವಾಜಿ ಮಹಾರಾಜರ ಪಾತ್ರ ಬಹುಮುಖ್ಯವಾದದ್ದು. ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರ ಕಟ್ಟಿದ ಮಹಾನ್ ನಾಯಕರಾಗಿದ್ದಾರೆ. ಆದ್ದರಿಂದ ಅವರ ಕೀರ್ತಿ ದೇಶವ್ಯಾಪಿ ಹರಡಿದೆ. ಶಿವಾಜಿ ಮಹಾರಾಜರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ಬಗ್ಗೆ ತಿಳಿಸಬೇಕು ಎಂದು ಚಿದಾನಂದ ಸವದಿ ಹೇಳಿದರು.  ಮಾಜಿ ಶಾಸಕರಾದ ಶ್ರೀ ಶಹಜಹಾನ್ ಡೊಂಗರಗಾಂವ, ಮುಖಂಡರಾದ ದಿಗ್ವಿಜಯ ಪವಾರ ದೇಸಾಯಿ,ಚಂದ್ರಕಾಂತ ಇಮ್ಮಡಿ, ಶ್ರೀಶೈಲ ನಾಯಿಕ, ಬಸವರಾಜ ಬುಟಾಳಿ, ಮರಾಠಾ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ವಿನಾಯಕ ದೇಸಾಯಿ, ಮರಾಠಾ ಸಮಾಜದ ಮುಖಂಡರಾದ ಶ್ರೀ ಸಂದೀಪ ಪಾಟೀಲ, ಶ್ರೀ ಬಾಹುಸಾಹೇಬ ಜಾಧವ, ರವಿ ದೇಸಾಯಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ದತ್ತಾ ವಾಸ್ಟರ, ರಾಜು ಗುಡೋಡಗಿ, ಮಲ್ಲೇಶ ಹುದ್ದಾರ, ವಿಲೀನರಾಜ ಯಳಮಲಿ ಹಾಗೂ ರಾಜು ಬುಲಬುಲೆ, ಆಸೀಫ ತಾಂಬೋಳಿ, ಸಾಹಿತಿಗಳಾದ ಅಪ್ಪಾಸಾಬ...

ಗೋಕಾಕ, ಚಿಕ್ಕೋಡಿ ಹೊಸ ಜಿಲ್ಲೆಗಳು; ಫೆ.16ರಂದು ಸಿಎಂ ಸಿದ್ದರಾಮಯ್ಯ ಘೋಷಣೆ ಸಾಧ್ಯತೆ

ಬೆಂಗಳೂರು : ರಾಜ್ಯದ ಅತಿದೊಡ್ಡ ಜಿಲೆಯ ಬೆಳಗಾವಿ ಭಾಗದ ವಿವಿಧ ಸಂಘಟನೆಗಳು ಮತ್ತು ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆ.16) ಬಜೆಟ್ ಮಂಡಿಸಲಿದ್ದು, ಈ ವೇಳೆ ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಎಲ್ಲ ವಿವರಗಳನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಚಿಕ್ಕೋಡಿ ಹಾಗೂ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕೆಂದು ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರು ಮೂರು ದಶಕಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆಡಳಿತಾತ್ಮಕ ಉದ್ದೇಶದಿಂದ ಬೈಲಹೊಂಗಲ ಮತ್ತು ಅಥಣಿ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸಬೇಕೆಂಬ ಒತ್ತಾಯವೂ ಇದೆ. 1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರು ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳಾಗಿ ಘೋಷಿಸಲು ಬಹುತೇಕ ಅಧಿಸೂಚನೆಯನ್ನು ಹೊರಡಿಸಿದ್ದರು. ಆದರೆ, ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಪ್ರಾಬಲ್ಯವನ್ನು ತಡೆಯಲು ವಿವಿಧ ಕನ್ನಡ ಸಂಘಟನೆಗಳ ಒತ್ತಡದಿಂದಾಗಿ ಜಿಲ್ಲೆಯ ವಿಂಗಡಣೆ ಮಾಡಲಿಲ್ಲ. “ಸರ್ಕಾರ ಆಡಳಿತ ಅನುಕೂಲಕ್ಕಾಗಿ ಬೆಳಗಾವಿ...