Skip to main content

Posts

Showing posts from July, 2024

ಅಥಣಿ : ಕರ್ನಾಟಕ ಪೊಲೀಸ್ ರಕ್ಷಣಾ ಸಂಘದ ಪದಗ್ರಹಣ ಹಾಗೂ ಐಡಿ ವಿತರಣೆ ಕಾರ್ಯಕ್ರಮ

  ಬೆಳಗಾವಿ :  ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಕರ್ನಾಟಕ ಪೊಲೀಸ್ ರಕ್ಷಣಾ ಸಂಘದ ಪದಗ್ರಹಣ ಹಾಗೂ ಐಡಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪೊಲೀಸ್ ರಕ್ಷಣಾ ಸಂಘದ ಉತ್ತರ ಕರ್ನಾಟಕ ಸಂಚಾಲಕರಾದ ರಜಾಕ ದ ಮುಲ್ಲಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು ಹಾಗೂ ಸಂಘಟನೆ ರಾಜ್ಯಾಧ್ಯಕ್ಷರಾದ N B ಕೃಷ್ಣಮೂರ್ತಿ ಅವರ ಮತ್ತು ಉತ್ತರ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಮಲಿಕ್ ಜಾನ್ ನದಾಫ್ ಅವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು   ಸಂದರ್ಭದಲ್ಲಿ ಚಿಕ್ಕೋಡಿಯ ಜಿಲ್ಲಾಧ್ಯಕ್ಷರನ್ನಾಗಿ ಇನ್ನುಸ್ ಬಾಲದಾರ್ ರವರನ್ನು ಆಯ್ಕೆ ಮಾಡಿ ಅವರಿಗೆ ಐಡಿ ವಿತರಣೆಯನ್ನು ಕರ್ನಾಟಕ ಪೊಲೀಸ್ ರಕ್ಷಣಾ ಸಂಘದ ರಾಜ್ಯ ಪದಾಧಿಕಾರಿಗಳಾದ ನಿಸಾರ್ ಬಾಲದಾರ್ ಇವರು ನೆರವೇರಿಸಿ ಕೊಟ್ಟರು  ಅದೇ ರೀತಿ ಚಿಕ್ಕೋಡಿ ಜಿಲ್ಲೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ವಿಜಯಕುಮಾರ್ ಪವಾರ್ ಅವರನ್ನ ಆಯ್ಕೆ ಮಾಡಲಾಯಿತು ಇವರಿಗೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನಮ್ಮ ಸಂಘಟನೆಯ ಪದಾಧಿಕಾರಿಗಳಾದ ಹೈದರ ಬಾಲದಾರ್ ಅವರು ಐಡಿ ನೀಡುವುದರ ಮೂಲಕ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಸುರೇಶ್ ಕೊಳ್ಳೋಳ್ಳಿ ಜ್ಯೋತಿಬಾ ಪವಾರ ನವೀನ ಮುಡಸಿ ಅಶೋಕ ದೊಡಮನಿ ಹನುಮಂತ ಸಿಂದೂರ್ ಶ...

ಶಾಸಕ ಮಹೇಂದ್ರ ತಮ್ಮಣ್ಣವರ್ ಗೆ ಸತೀಶ್ ಜಾರಕಿಹೊಳಿ ವಾರ್ನಿಂಗ್

ರಾಯಬಾಗ ನಾನು ಹೆಂಡತಿ, ಮಕ್ಕಳ ಮಾತನ್ನೇ ಕೇಳುವವನಲ್ಲ. ಇನ್ನು ಇವರದ್ದು ಕೇಳುತ್ತೇನಾ? ನೀವಿನ್ನೂ ಎಲ್ಎಲ್ಆರ್ ನಲ್ಲಿ ಗಾಡಿ ಓಡಿಸ್ತಾ ಇದ್ದೀರಿ. ಈಗಲೇ ಬಿದ್ದರೆ ಮುಂದೆ ಲೈಸನ್ಸ್ ಸಿಗೋದು ಕಷ್ಟ. ಹಾಗಾಗಿ ಹುಷಾರಾಗಿರಿ -ಇದು ಲೋಕೋಪಯಾಗಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಅವರಿಗೆ ವಾರ್ನಿಂಗ್ ನೀಡಿದ ರೀತಿ ಇದು. ಹಾರೂಗೇರಿ ಪಟ್ಟಣದಲ್ಲಿ ನೂತನ ಸಂಸದರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರ ತಮ್ಮಣ್ಣವರ್ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎನ್ನುವ ತಮ್ಮ ಈ ಹಿಂದಿನ ಆರೋಪವನ್ನು ಸಮರ್ಥಿಸಿಕೊಂಡು ತಮ್ಮಣ್ಣವರ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಸ್ವ ಪಕ್ಷದರೇ ಕೆಲಸ ಮಾಡಿದ್ದರು, ನಾನು ಮಾಜಿ ಶಾಸಕ ಶಾಮ್ ಘಾಟಗೆ ಮಾತು ಕೇಳುತ್ತೇನೆ ಎಂದು ತಮ್ಮಣ್ಣವರ್ ಆರೋಪ ಮಾಡುತ್ತಾರೆ. ನಾನು ನನ್ನ ಹೆಂಡತಿ, ಮಕ್ಕಳ ಮಾತೂ ಕೇಳಲ್ಲ. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ. ಸುಮ್ಮನೆ ಆರೋಪ ಮಾಡಲು ನಾನು ಖಾಲಿ ಇಲ್ಲ. ಯಾರು ಕೆಲಸ ಮಾಡಿಲ್ಲ ಅವರ ವಿರುದ್ಧ ಆರೋಪ ಮಾಡಿದ್ದೇನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗುತ್ತಿತ್ತು. ರಾಜಕೀಯದಲ್ಲಿ ಹೊಂದಾಣಿಕೆ ಇರಬೇಕು, ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವು...